उत्सवदीपः
रूपं न मे पूर्वमधः सरस्याः
कस्याश्चिदासं किल पङ्कपिण्डम् ।
चन्द्रं न सूर्यं न कदाप्यजानां
रावो हि सर्वत्र जलेचराणाम्॥ १ ॥
पद्मिन्यथैका मयि लग्नमूला
व्याजेन मन्मार्दवघोषणस्य।
पीत्वा रसं मे बहिरागता च
प्रसह्य सूर्यं खलु पर्यणैषीत् ॥ २ ॥
सूर्यांशुसंस्पर्शनरम्यलाभः
चिराय नासीन्मम मन्दभाग्यात्।
अव्यक्तहेतोः सलिलं सरस्याः
क्रमेण नष्टं जलजा हताश्च ॥ ३ ॥
रवेरपश्यं खलु तीक्ष्णरश्मीन्
क्षुद्रत्वमुर्व्याश्च तदैककाले ।
चूर्णोऽभवं मार्दवभावहीनः
श्रुता मया निष्ठुरवाग्जनानाम् ॥ ४ ॥
कश्चिन्नरो मां किल मर्दयित्वा
पद्भ्यां अवादीन्नरमन्यमुच्चैः ।
अत्रैव पद्मं कमनीयमासीत्
तन्नाद्य खल्वित्यह मामुपेक्ष्य ॥ ५ ॥
दीर्घं विनिश्वस्य वचो निशम्य
सूर्यस्य रश्मीन् हि विगर्हमानः ।
अयापयं नैकदिनानि दीनः
सम्मर्दितो मर्त्यशतैः च पद्भिः ॥ ६ ॥
वरं जलं जीवनधारणाय
वाय्वोः प्रभो मेऽस्तु जले हि वासः ।
इतीश्वरं प्रार्थयमानमेत्य
कृषीवलो मामनयत् तटान्तम् ॥ ७ ॥
दिनेषु गच्छत्सु सरांसि पूरयन्
दिष्ट्याऽगतः हर्षकरो हि वर्षः ।
जले मिमङ्क्षुः प्रसभं ह्यवाञ्छम्
जलप्रवृत्तिं मृदुतामवाप्तः ॥ ८ ॥
अहं तटान्ते सलिलं त्वधस्तात्
क्रूरो विधिः किं करवाण्यशोचम् ।
मां पिण्डितं कश्चन कुम्भकारः
अनाययत् हन्त गृहं सलीलम् ॥ ९ ॥
घटाश्च केचित् घटिकाश्च काश्चित्
प्राप्तं मया दीपकरूपमत्र ।
क्लेशो गतः कापि मनोज्ञतासीत्
तप्तोऽप्यभूवं किल नष्टतापः ॥ १० ॥
स्नेहार्द्रवर्त्या प्रससार दीप्तिः
लब्धो मया भासुरभास्करांशः ।
जानन्तु दीप्तिं न तु मां कदाचित्
इति स्पृहा कापि मयि प्रभाति ॥ ११ ॥
भूयात्तमो नाशयितुं समर्था
मद्दीप्तिवीच्युत्सवदीपपङ्क्तौ
द्युतिस्तु दृश्येत न मत्स्वरूपम्
ह्रिया विनम्रं भजतामदर्शनम् ॥ १२ ॥
उपरि प्रकटिता कविता दशवत्सराणां पूर्वं प्रकटितायाः मद्रचितायाः अस्याः कन्नडकवितायाः संस्कृतच्छाया
ದೀವಳಿಗೆಯ ಸೊಡರು
ಬಹಳ ಹಿಂದಿನ ಮಾತು, ರೂಪವಿರಲಿಲ್ಲೆನಗೆ;
ಊರಕೆರೆಯಡಿ ನಾನು ಕೆಸರ ಮುದ್ದೆ;
ನೋಡರಿಯದಿದ್ದೆ ನಾ ನೇಸರನ ಚಂದಿರನ
ಎಲ್ಲೆಲ್ಲು ಮೀನ ಮನೆಮಾತ ಸದ್ದೆ! (೧)
ತಾವರೆಯ ಗಿಡವೊಂದು ನನ್ನಲ್ಲಿ ಬೇರೂರಿ
“ಬಯಲುಮಾಡುವೆ ನಿನ್ನ ಮಾರ್ದವವನು”
ಎಂಬುವಾಸೆಯ ತೋರಿ, ನನ್ನ ರಸವನು ಹೀರಿ
ಹೊರಗೆ ಬಂದಿತು; ವರಿಸಿತಾ ರವಿಯನು. (೨)
ಕಾಲ ಕಳೆಯಿತು ಇಂತೆ; ನೇಸರಿನ ಕದಿರುಗಳ
ಬಹಳ ಕಾಲದವರೆಗು ಕಾಣಲಿಲ್ಲ;
ಏಕೊ, ಏನೋ ಕಾಣೆ, ಕೆರೆಯ ನೀರಿಲ್ಲಾಯ್ತು;
ಮೀನ್ಗೆ ಮಸಣವ ತೋರಲಂಜಲಿಲ್ಲ. (೩)
ನೇಸರನ ಬೆಳಕ ನಾ ಕಂಡುದಂದೇ; ಅಂದೆ
ತಿರೆಯ ಕಿರಿತನವನೂ ಕಂಡೆ ನಾನು;
ಹಳೆಯ ಮಾರ್ದವವಿಲ್ಲವಾಗಿ ಪುಡಿಯಾಗಿದ್ದೆ;
ಅಂಜದೆಯೆ ಜನರ ನುಡಿಗಳ ಕೇಳಿದೆ. (೪)
ಯಾರೊ ಒಬ್ಬನು ನನ್ನ ತನ್ನ ಕಾಲೊಳು ತುಳಿದು
ಮತ್ತಾರ ಕೂಡೆಯೋ ಇಂತೆಂದನು,
“ಸೊಗಸಾದ ತಾವರೆಯದೊಂದಿತ್ತು ಈ ಎಡೆಯೊ-
ಳೀಗಿಲ್ಲ”-ಮರೆತ ತಾ ನನ್ನಿರವನು. (೫)
ಕೇಳಿ ಸಹಿಸಿದೆ, ಮನದೆ ನಿಟ್ಟುಸಿರ ನಾ ಬಿಟ್ಟೆ;
ಹೊಲಸು ನೇಸರ ಕಿರಣವೆಂದೆನಿಸಿತು;
ಎನಿತೊ ಕಾಲವ ಕಳೆದೆ, ಜನರ ತುಳಿತಕೆ ಸಿಕ್ಕಿ
ಯುಗಯುಗವ ಕಳೆವೆನೋ ಎಂದೆನಿಸಿತು. (೬)
“ಸಾಕು ಗಾಳಿಯ ಬಾಳು, ನೀರ ಬಾಳೇ ಲೇಸು,
ಮುಗಿಸಿದನು ನೀಡದನು”, ಎಂದೆಂದೆನು.
ಮತ್ತೊರ್ವನಾವನೋ ತನ್ನ ಹೊಲಗಳಿಗೆಂದು
ದಯೆಯಿಲ್ಲದೆಯೆ ನನ್ನ ದಡಕೆಳೆದನು. (೭)
ಸಾಗಿತಿಂತೇ ಬಾಳು; ಮಳೆಗಾಲ ಬಂದಿತ್ತು;
ಕೆಳಗೆ ನೀರಿನ ಬಾಳು ಕರೆದಿದ್ದಿತು.
ಮಾರ್ದವತೆ ಬಂದಿತ್ತು; ನೀರೊಳಗಿನಾ ಬಾಳ
ಸವಿಯಬೇಕೆಂದು ಮನ ಹಾತೊರೆಯಿತು. (೮)
ನೀರ ಬಾಳಿಲ್ಲಾಯ್ತು; ಅದು ಕೆಳಗೆ ನಾ ಮೇಲೆ;
ಬಾಳ ಸಂತಸ ಮುಗಿಯಿತೆಂದೆನಿಸಿತು;
ಕುಂಬಾರನಂತವನು-ನನ್ನ ಮುದ್ದೆಯ ಮಾಡಿ
ಮನೆಗೊಯ್ದ, ಮನವೇಕೊ ಹಗುರಾಯಿತು. (೯)
ಎಷ್ಟೊ ಮಡಕೆಗಳಲ್ಲಿ, ಎಷ್ಟೊ ಹಂಚುಗಳಲ್ಲಿ;
ನನ್ನ ಪಾಲಿಗೆ ಬಂತು ದೀಪರೂಪ;
ನನ್ನ ಬಾಳಲಿ ಪಟ್ಟ ದುಗುಡ ಹಗುರಾಗಿತ್ತು.
ತಪ್ತನಾದರೇನು? ವಿಗತತಾಪ! (೧೦)
ಸ್ನೇಹಾರ್ದ್ರವಾಯ್ತು ಮನ, ಹೊರಟಿತೈ ನಲ್ಬೆಳಕು
ಸೂರ್ಯಾಂಶವನ್ನೆ ನಾ ಪಡೆದಿರುವೆನು;
“ಬೆಳಕ ಮರೆಯಲಿ ಬಿಡಲಿ, ನನ್ನನರಿಯದೆ ಇರಲಿ”
ಎಂಬುದೊಂದರಿವ ನಾ ಪಡೆದಿರುವೆನು. (೧೧)
ಕತ್ತಲೆಯನಡಗಿಸಲು ದೀಪದಾವಳಿಯಲ್ಲಿ
ನನ್ನ ಬೆಳಕಿನ ಶಕ್ತಿಯಲೆಯಾಗಲಿ.
ಬೆಳಕು ಕಾಣಲಿ, ಬೆಳಕ ಹಿಡಿದ ಈ ಕಿರಿಹಣತೆ
ನಾಚಿ ತಲೆ ತಗ್ಗಿಸಲಿ, ಕಾಣದಿರಲಿ (೧೨)
- - - -