कवेऽवगच्छ
विज्ञानभूतं जगतः सुकाब्यं व्यनाशयत् नीरससत्यमार्गणे ।
हृदो महत्त्वं खलु नष्टमास्ते जिज्ञासयेति त्यज गाढशङ्काम् ॥
कवेऽवगच्छ द्विगुणीकृता वै हृदो प्रतिष्ठा भुवि तेन सम्यक् ।
ब्रह्माण्डकोष्ठे उडुवृन्दपुञ्जाः भवन्त्यनेके बृहतश्च तेषु ॥
आकाशगङ्गा त्वणुरेव तस्मात् परं त्वणीयान् खलु सौरवृन्दः ।
तत्रास्ति पृथ्वीत्वणुका च तस्यामणिष्ठभूतः खलु मर्त्यजन्तुः ॥
विज्ञानमेतत् मनुजस्य गाढपराक्रमद्योतकमेव विद्धि ।
स्वाणिष्ठभावे प्रतताभिमानवत्हृदो महत्त्वस्य जयध्वजश्च ॥
इयं कविता बहुदशकानां प्राक् प्रकाशितायाः मम कन्नडकवितायाः छाया ।
ಹೆದರದಿರು ಕಬ್ಬಿಗನೆ
ಹೆದರದಿರು ಕಬ್ಬಿಗನೆ ಹೆದರಿ ಹೊರಗೆಡಹದಿರು
ನಿನ್ನ ಮನದಂಜಿಕೆಯ. ವಿಶ್ವದೀ ಕಾವ್ಯವನು
ಪೈಶಾಚವಿಜ್ಞಾನ ಹಾಳಿಸಿತು ಎನ್ನದಿರು.
ಜಡತಥ್ಯಗಳನರಸಿ, ಹೃದಯದಾ ಹಿರಿಮೆಯನು
ಜಿಜ್ಞಾಸೆಯಿಂದಳಿಸಿದರು ಎನ್ನದಿರು. ನರನ
ಹೃದಯದೌನ್ನತ್ಯವನ್ನಿಮ್ಮಡಿಸಿರುವುದನರಿ.
ಅಂಕೆಯಂಕೆಯ ಮೀರ್ದ ನೀಹಾರಿಕಾಗಡಣ
ಗಳವೆಷ್ಟೊ ಈ ವಿಶ್ವದವಕಾಶದಲ್ಲಿ. ಬರಿ
-ಕಣವು-ತೋಲನಮಾಡೆ- ನಮ್ಮ ಬೃಹದಾಕಾಶ
-ಗಂಗೆ ತಾನ್; ಆ ಕಣಕೆ ಕಣವು ಸೌರವ್ಯೂಹ;
ಅದರೊಳಿಹುದೀ ಪೃಥ್ವಿ. ನರಹೃದಯದಾ ಭಾಸ
ಈ ಬೃಹತ್ಪೃಥ್ವಿಯೊಳು! ನರನ ಹಿರಿದಹ ಸಾಹ
-ಸವೆ ಆದ ಈ ಅರಿವು ತನ್ನಿರವ ಕಿರಿತನಕೆ
ಹೆಮ್ಮೆಪಡುತಿಹ ಹೃದಯದೌನ್ನತ್ಯದ ಪತಾಕೆ !
- - - -
No comments:
Post a Comment